ಪ್ರತಿಷ್ಠಾನದ ಪರಿಚಯ
ಸಾಮವೇದದ ಅಧ್ಯಯನ ಮತ್ತು ಅಧ್ಯಾಪನ ಇನ್ನೂ ಹೆಚ್ಚಾಗಿ ಬೆಳೆಯಲು ಅನುಕೂಲವಾಗುವಂತೆ ಸಾಮವೇದ ಗ್ರಂಥಗಳನ್ನು ಕನ್ನಡದಲ್ಲಿ ಸಂಪಾದಿಸಿ ಯಥಾಶಕ್ತಿ ಪ್ರಕಟಿಸಿ
ಪ್ರಚಾರ ಮಾಡಬೇಕೆಂಬ ಅಭಿಲಾಷೆಯುಳ್ಳ ಸಾಮವೇದಾಧ್ಯಯನದಲ್ಲಿ ಆಸಕ್ತರಾದ ಸಮಾನ ಮನಸ್ಕರಿಂದ ೧೯೮೦ ರಲ್ಲಿ "ದ್ರಾಹ್ಯಾಯಣ ಪ್ರತಿಷ್ಠಾನ" ಸಂಸ್ಥೆ ರೂಪುಗೊಂಡಿತು.
ಅಂದಿನಿಂದ ಪ್ರತಿಷ್ಠಾನ ಸಾಮವೇದ ಕ್ಷೇತ್ರದಲ್ಲಿ ಅವಿರತವಾಗಿ ತನ್ನ ಸೇವೆ ಸಲ್ಲಿಸುತ್ತಿದೆ. ಭಾಷ್ಯಗಳನ್ನೊಳಗೊಂಡ ಋಕ್ ಮತ್ತು ಸಾಮ ಗಾನ ಸಂಹಿತೆ, ನಿತ್ಯವಿಧಿ, ದೇವಾತರ್ಚನೆ, ಪೂರ್ವ, ಅಪರ ಪ್ರಯೋಗಗಳ ವಿಧಿ ಮತ್ತು ಅರ್ಥ ಇತ್ಯಾದಿ ೧೫ಕ್ಕೂ ಹೆಚ್ಚು ಕನ್ನಡ ಪುಸ್ತಕಗಳನ್ನು ಪ್ರಕಟಿಸಿದೆ.
ಇತ್ತೀಚಿಗೆ ಡಿಜಿಟಲ್ ತಂತ್ರಜ್ಞಾನದ ಸಹಯೋಗದಿಂದ ಸಾಮವೇದದ ಅಂತರ್ಜಾಲ ತಾಣದ ಅಭಿವೃದ್ಧಿ, youtube ನಲ್ಲಿ ಸೂಕ್ತಗಳ ಪ್ರಕಟಣೆ, onlineನಲ್ಲಿ ಸಾಮವೇದ ತರಗತಿಗಳು ಹೀಗೆ ಹಲವಾರು ಉಪಕ್ರಮಗಳನ್ನು ಕೈಗೆ ಎತ್ತಿಕೊಳ್ಳಲಾಗಿದೆ.
ಉದ್ದೇಶಗಳು
ಸಾಮವೇದ ಅಧ್ಯಾಪನ ಗುರು ಮುಖೇನ- Offline ಮತ್ತು online ಮಾಧ್ಯಮಗಳಲ್ಲಿ.
ಸಾಮವೇದ ಪಾರಾಯಣಗಳ ವ್ಯವಸ್ಥೆ.
ಸಾಮವೇದ ಪ್ರಯೋಗಗಳ ಪ್ರಕಟಣೆ, ತರಬೇತಿ.
ಸಾಮವೇದ ಪ್ರಚಾರ.